ಶಾಲಾ ಶಿಶುಪ್ರಾಸಗಳು
೧.ಅವಲಕಿ ಪವಲಕಿ
ಕಾಂಚಿನ ಮಿಣಿಮಿಣಿ 
ಡಾಂ ಡೂಂ ಡಸ್ಸ ಪಿಸ್ಸ
ಕೊಯ್ಯ್ ಕೊಟಾರ್

೨.ಆನೆ ಬಂತೊಂದಾನೆ
ಯಾವ ಪುರದಾನೆ ?
ದಿಡ್ಡಪುರದಾನೆ
ಇಲ್ಲಿಗ್ಯಾಕ್ ಬಂತು ?
ಮಕ್ಕಳ್ ನೋಡಾಕ್ ಬಂತು
ಹಾದಿಲೊಂದು ಕಾಸು
ಬೀದಿಲೊಂದು ಕಾಸು
ಕಾಸ್ನೆಲ್ಲಾ ಸೇರ್ಸಿ 
ಸೇರು ಪುರಿ ತರ್ಸಿ
ಮಕ್ಕಳ್ಗೆಲ್ಲಾ ಹಂಚ್ಸೀ
ತಾನ್ ಸ್ವಲ್ಪ ತಿಂದು ಓಡೋಯ್ತ್

೩.ಚೆಂಗೂಲಾಬಿ ಹೂವೇ
ಬಿಸಿಲಲಿ ಕುಳಿತು
ಒಣಗುವೆ ಏಕೆ ?
ಎದ್ದೇಳು ಮ್ಯಾಕೆ
ಹಿಂದೆ ಮುಂದೆ ತಿರುಗು
ಕಣ್ಣೀರ್ನೇಲ್ಲಾ ಒರೆಸು
ನಿಂಗ್ ಇಷ್ಟ ಬಂದೋರ್ನೇಲ್ಲಾ ಕರೆಸು

೪.ಕಣ್ಣೇ ಮುಚ್ಚೇ ಕಾಡೇಗೂಡೆ
ಉದ್ದಿನ ಮೂಟೆ 
ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡ್ದು ಕೊಳ್ಳಿ
ನಿಮ್ಮನೇಲಿ ಏನ್ ಸಿಹಿ?
ಪಾಯ್ಸ
ಪಾಯ್ಸ ದ್ಗೋಳ್ಗೇನು?
ನೊಣ ಬಿದ್ದದೆ
ನೊಣ ಬಿಟ್ಟು ಜನ ಬಡ್ಕೊ ಬಾ

೫.ಚಪಾತಿ ಚಪ್ ಚಪ್
ಜೀಲೇಬಿ ಜಿಂ ಜಿಂ
ಹಾಲು ಕಾಫಿ ಗೊಟಗೊಟ
ಕಳ್ಳೇಕಾಯಿ ಪಟಪಟ
ಉಪ್ಪಿನಕಾಯಿ ಲೊಚಲೊಚ
ಅನ್ನ-ಸಾರು ಸೊರಸೊರ
ಹೊಟ್ಟೆ ತುಂಬ್ತು ಬರಬರ
ನಿದ್ದೆ ಮಾಡು ಸರಸರ

೬.ಟೋಪಿ ಬೇಕೆ ಟೋಪಿ ?
ಎಂಥಾ ಟೋಪಿ?
ಚಿನ್ನದ ಟೋಪಿ
ಎಷ್ಟು ರೂಪಾಯಿ?
ನೂರು ರೂಪಾಯಿ 
ಕೊಡು ಕೊಡು ಮಂತೆ
ತಕೋ ತಕೋ ಮಂತೆ

೭.ಜಯಮ್ಮ ಜಯಮ್ಮ ಜಾಕೇಟು
ಜಯಮ್ಮನ ಗಂಡ ಪಾಕೇಟು
ಆಡೋದೆಲ್ಲಾ ಇಸ್ಪೀಟು
ಸೇದೋದೆಲ್ಲಾ ಸಿಗರೇಟು
ನೆಗೆದು ಬಿದ್ದು ನೆಲ್ಲಿಕಾಯಾಗೋದ

೮.ಡಮರೆ ಡಮರೆ ಡಂ
ಮನೆ ಸುಟ್ಟೋಯ್ತು
ಯಾರ ಮನೆ ?
ಪೂಜಾರಿ ಮನೆ
ಯಾವ ಪೂಜಾರಿ ?
ಜುಟ್ಟು ಪೂಜಾರಿ 
ಯಾವ ಜುಟ್ಟು ?
ಬಾತು ಜುಟ್ಟು
ಯಾವ ಬಾತು ?
ತಿನ್ನೋ ಬಾತು
ಯಾವ ತಿನ್ನು ?
ಏಟು ತಿನ್ನು
ಯಾವ ಏಟು ?
ದಪ್ಪ ಏಟು
ಯಾವ ದಪ್ಪ ?
ದೊಣ್ಣೆ ದಪ್ಪ
ಯಾವ ದೊಣ್ಣೆ ?
ತಾತನ ದೊಣ್ಣೆ

೯.ಗುಂಡ ಗುಂಡ ಗುಂಡ 
ಹೊಸ ಮನೆಗೋದ
ಹೊಸಬಟ್ಟೆ ಸಿಕ್ತು
ಹಳೆ ಮನೆಗೋದ
ಹಳೇ ಬಟ್ಟೆ ಸಿಕ್ತು
ನಡು ಮನೆಗೋದ
ನಡ ಮುರ್ಕೊಂಡು ಬಂದ

೧೦.ಹಾವ್ ಹಾವ್ ಮಲರೆ
ಗೌರಿ ಕಡ್ಡಿ ಮಲರೆ
ತಿಮ್ಮರಾಯಪ್ಪ ಬಿದ್ದ
ಬಿದ್ದವ್ನ ಕೈಲಿ ಬಿಲ್ಲು
ಎದ್ದವ್ನ ಕೈಲು ಎಳ್ಳು
ಕಾಡೇ ಗೌಡನ ಕಟ್ಟೆ
ಗುಡುಗಾಡಕ್ಕಿ ಮೊಟ್ಟೆ
ಆಚೆಕಲ್ಲು ಈಚೆಗೆ
ನೋಡಿ

ವರ್ಗ: ಶಿಶುಸಾಹಿತ್ಯ
ವರ್ಗ: ಕನ್ನಡ ಸಾಹಿತ್ಯ